ಗಣೇಶನ ಮೂರ್ತಿಗಳ ವಿಸರ್ಜನೆ ಸ್ಥಳದಲ್ಲಿ ಪಾಲಿಕೆಯಿಂದ ಡಿಜೆ ವ್ಯವಸ್ಥೆ: ಆಯುಕ್ತೆ ಶುಭ
Join WhatsApp | Join Telegram | Live |

Yuva Vahini - News Desk.
ಬೆಳಗಾವಿ: ಪಾಲಿಕೆಯಿಂದ ಗಣೇಶ ಹಬ್ಬದಲ್ಲಿ ಮುಖ್ಯವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ವೆಟ್ ಮಿಕ್ಸ್ ಬಳಕೆ ಮಾಡಲಾಗುತಿದ್ದು, ನೀರಿನಲ್ಲೂ ಕೋಡಾ ಇದು ಪರಿಣಾಮಕಾರಿಯಾಗಿದೆ ಎಂದು ಪಾಲಿಕೆ ಆಯುಕ್ತೆ ಶುಭ ಅವರು ತಿಳಿಸಿದರು.
ವಿವಿಧ ಗಣೇಶ ಉತ್ಸವ ಮಂಡಳಿಗಳ ಜೊತೆ ನಡೆಸಿದ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 27 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ರಾತ್ರಿ ಗುಂಡಿಗಳು ಮುಚ್ಚಿತಿದ್ದೇವೆ. 50 ಪ್ರತಿಶತ ಗುಂಡಿಗಳು ಮುಚ್ಚಿದ್ದೇವೆ. ಕಪಿಲೇಶ್ವರ ಹೊಂಡದಲ್ಲಿ ಗಣೇಶ ಮೂರ್ತಿಗ ವಿಸರ್ಜನೆಗೆ ಹೆಚ್ಚಿನ ಭಾರ ತಪ್ಪಿಸಲು ಜಕ್ಕೇರಿ ಹೊಂಡದಲ್ಲೂ ಮೂರ್ತಿಗಳ ವಿಸರ್ಜನೆ ಆಗಲಿದೆ. ಪ್ರೇಕ್ಷಕರ ಗ್ಯಾಲರಿ, ಸಿಸಿಟಿವಿ, ಪೋಕಸ್ ಲೈಟ್ ವ್ಯವಸ್ಥೆ ಮಾಡುತ್ತೇವೆ 19 ಮೋಬೈಲ್ ಟ್ಯಾಂಕರ್ ಗಳ ವ್ಯವಸ್ಥೆ ಇರಲಿದ್ದು, 11 ದಿನಗಳ ಕಾಲವು ಸಾರ್ವಜನಿಕರು ಈ ಟ್ಯಾಕರಗಳಲ್ಲಿ ಗಣೇಶನ ವಿಸರ್ಜನೆ ಮಾಡಬಹುದು. ಮೆರವಣಿಗೆಯಲ್ಲಿ ಪಾಲಿಕೆವತಿಯಿಂದ ಡಿಜೆ ವ್ಯವಸ್ಥೆ ಮಾಡಲಿದ್ದೇವೆ ಎಂದರು.
Join WhatsApp | Join Facebook | Live | Join Telegram |