ಡಾ. ನಾಗಲೋಟಿಮಠ ಸಾಧನೆ ಅವಿಸ್ಮರಣೀಯ: ಶ್ರೀ ಗುರುಸಿದ್ಧ ಸ್ವಾಮೀಜಿ 

Aug 18, 2025 - 17:29
 10
Facebook Join WhatsApp Join Telegram Live

ಡಾ. ನಾಗಲೋಟಿಮಠ ಸಾಧನೆ ಅವಿಸ್ಮರಣೀಯ: ಶ್ರೀ ಗುರುಸಿದ್ಧ ಸ್ವಾಮೀಜಿ 

Yuva Vahini - News Desk.

ಬೆಳಗಾವಿ : ಡಾ.ಸ.ಜ.ನಾಗಲೋಟಿಮಠ ತಮ್ಮ ಸಾಧನೆಯಿಂದ ಬೆಳಗಾವಿಗೆ ರಾಷ್ಟ್ರ ಮಟ್ಟದ ಕೀರ್ತಿ ತಂದುಕೊಟ್ಟ ಧೀಮಂತರು.  ಅವರ ಸಾಧನೆ ಅವಿಸ್ಮರಣೀಯ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಅವರು ಬೆಳಗಾವಿ ನಗರದ ಬಸವ ಕಾಲನಿಯಲ್ಲಿ ಡಾ. ಸ. ಜ. ನಾಗಲೋಟಿಮಠ ಅವರ ಮೂರ್ತಿ ಅನಾವರಣ ನೇರವೇರಿಸಿ ಮಾತನಾಡಿದರು. 
ಅನಾಮಧೇಯ ಹಿನ್ನೆಲೆಯಿಂದ ಬಂದ ಡಾ. ನಾಗಲೋಟಿಮಠ ಅವರು ತೀವ್ರ ಬಡತನದಲ್ಲಿಯೂ ಅವಿರತ ಪ್ರಯತ್ನ ಪಟ್ಟು ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿ ಯುವ ಜನಾಂಗಕ್ಕೆ ಆದರ್ಶಪ್ರಾಯರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಡಾ. ನಾಗಲೋಟಿಮಠರ ಬಹುಮುಖ ವ್ಯಕ್ತಿತ್ವ ಕುರಿತು ಮಾತನಾಡುತ್ತ ಡಾ. ನಾಗಲೋಟಿಮಠ ಅವರು ನಮ್ಮ ಶ್ರೀಮಠದ ಆವರಣದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಿ ಈ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿದವರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಸವ ಕಾಲನಿ ರಹವಾಸಿಗಳು ಗೌರವಾಭಿನಂದನ ಪತ್ರ ಸಮರ್ಪಿಸಿ ಗೌರವಿಸಿದರು. 
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಮಂಗೇಶ್ ಪವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅನಿಲ ಬೆನಕೆ,
ಮಾಜಿ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಂ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ,  ಮಹಾಂತೇಶ ವಕ್ಕುಂದ, ಶಾಂತಾ ನಾಗಲೋಟಿಮಠ, ಸುನಿತಾ ನಾಗಲೋಟಿಮಠ ಇಂಪನಾ ನಾಗಲೋಟಿಮಠ ಉಪಸ್ಥಿತರಿದ್ದರು. 

ಬಸವ ಕಾಲನಿ ರಹವಾಸಿಗಳ ಸಂಘದ ಅಧ್ಯಕ್ಷ ಕೆ. ಆಯ್. ಗಾಣಿಗೇರ ಅವರು ಸ್ವಾಗತಿಸಿದರು. ಬಸವರಾಜ ಹಳಿಂಗಳಿ ಕಾರ್ಯಕ್ರಮ ನಿರೂಪಿಸಿದರು.  ಉಮಾ ಕರಜಗಿಮಠ ವಂದಿಸಿದರು.

Join WhatsApp Join Facebook Live Join Telegram

Tags: