ಸಾಧನೆ ಬೇರೆಯವರಿಗೆ ಪ್ರೇರಣೆಯಾಗಬೇಕು : ನ್ಯಾಯವಾದಿ ಶಂಕರ ಗೋರೋಶಿ

Aug 16, 2025 - 20:57
 75
Facebook Join WhatsApp Join Telegram Live

ಸಾಧನೆ ಬೇರೆಯವರಿಗೆ ಪ್ರೇರಣೆಯಾಗಬೇಕು  : ನ್ಯಾಯವಾದಿ ಶಂಕರ ಗೋರೋಶಿ

Yuva Vahini - News Desk.

ಗೋಕಾಕ: ನಮ್ಮ ಸಾಧನೆ ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದು ಚೆನ್ನಬಸವೇಶ್ವರ ವಿದ್ಯಾಪೀಠದ ನಿರ್ದೇಶಕ, ನ್ಯಾಯವಾದಿ ಶಂಕರ ಗೋರೋಶಿ ಹೇಳಿದರು.
 

ಶನಿವಾರದಂದು ನಗರದ ಚೆನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 


    ಪಾಲಕರ ಧ್ಯೇಯೋದ್ದೇಶಗಳನ್ನು ಈಡೇರಿಸಲು ವಿದ್ಯಾರ್ಥಿಗಳು ತನು,ಮನದಿಂದ ವಿದ್ಯಾಬ್ಯಾಸ ಮಾಡಿ ಅವರಿಗೆ ಕೀರ್ತಿ ತರಬೇಕು. ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಸಾಧಕರಾಗಲು ಸಾಧ್ಯ ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ವಿದ್ಯಾಬ್ಯಾಸ ಮಾಡಿ ಸಾಧಕರಾಗಬೇಕು. ಭಾರತ ದೇಶದಲ್ಲಿ ಸಾಧಕರಿಗೆ ಉತ್ತಮ ಅವಕಾಶಗಳು ಇವೆ. ಶ್ರದ್ಧೆ ಮತ್ತು ಭಕ್ತಿಯಿಂದ ನಾವು ನಮ್ಮ ಕೆಲಸಗಳನ್ನು ಮಾಡಿದರೆ ಏನುಬೇಕದರೂ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಚೆನ್ನಬಸವೇಶ್ವರ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ ಎಂದು ಹೇಳಿದರು. 


     ಆಡಳಿತಾಧಿಕಾರಿ ಅಡಿವೇಶ ಗವಿಮಠ ಮಾತನಾಡಿ ಅವಶ್ಯಕತೆ ಹಾಗೂ ಅನುಕೂಲಕ್ಕೆ ತಕ್ಕಂತೆ ವರ್ತಿಸದೆ ವಿಶಿಷ್ಟ ರೀತಿಯಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು. ನಮಗೆ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಮ್ಮ ಮೇಲೆ ನಮ್ಮಗಿರುವ ನಂಬಿಕೆಯನ್ನು ಗುರುತಿಸಿಕೊಂಡು ಅದನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಸಾಧಕರಾಗಲು ಸಮಾಜದಲ್ಲಿ ಸಾಕಷ್ಟು ದಾರಿಗಳು ಇವೆ ಅವುಗಳನ್ನು ಹುಡುಕಿಕೊಂಡು ತಮಗೆ ಅನುಕೂಲವಾಗುವ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಸಾಧನೆ ಕಟ್ಟಿಟ ಬೂತ್ತಿ ಹಾಗಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ ಓದಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ಅರ್ಪಣಾ ಕುಲಕರ್ಣಿ, ಪವಿತ್ರಾ ಡಿಸೋಜಾ ಇದ್ದರು.

Join WhatsApp Join Facebook Live Join Telegram

Tags: