ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Aug 15, 2025 - 21:36
 223
Facebook Join WhatsApp Join Telegram Live

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Yuva Vahini - News Desk.

ಬೆಳಗಾವಿ : ಸ್ನೇಹಿತನ ಬಳಿ ಹಣ ಕೇಳಲು ಹೋಗಿದ್ದ ಯುವಕನ ಮೇಲೆ 10 ಕ್ಕೂ ಹೆಚ್ಚಿನ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಮೀಪದ ಬಿ.ಕೆ.ಕಂಗ್ರಾಳಿ ಗ್ರಾಮದಲ್ಲಿ ನಡೆದಿದೆ. 

ಬೆಳಗಾವಿ ನಗರದ ನ್ಯೂ ವೈಭವ ನಗರದ ನಿವಾಸಿ ಸೋಹಿಲ್ ಅತ್ತಾರ( 24) ಘಟನೆಯಲ್ಲಿ ಗಾಯಗೊಂಡಿರುವ ಯುವಕ. ಗಾಯಾಳು ಸೋಹಿಲ್ ನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಂಗ್ರಾಳಿಯಲ್ಲಿರುವ ಸ್ನೇಹಿತನ ಬಳಿ ಹಣ ಕೇಳಲು ಹೋಗಿದ್ದಾಗ ಹಲ್ಲೆ ಎಂಬ ಆರೋಪ.
10ಕ್ಕೂ ಅಧಿಕ ಯುವಕರಿಂದ ಗುಂಪಿನಿಂದ ಹಲ್ಲೆ ಆರೋಪ.


ಕಟ್ಟಿಗೆ ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಗಾಯಾಳು ಆರೋಪಿಸಿದ್ದಾರೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Join WhatsApp Join Facebook Live Join Telegram

Tags: