ಗೋಕಾಕ ನಗರದಲ್ಲಿ ಬೀದಿ ನಾಯಿಗಳಿಂದ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ.!

Nov 30, 2024 - 19:00
 87
Facebook Join WhatsApp Join Telegram Live

ಗೋಕಾಕ ನಗರದಲ್ಲಿ ಬೀದಿ ನಾಯಿಗಳಿಂದ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ.!

Yuva Vahini - News Desk.

ಗೋಕಾಕ: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಶ್ವಾನಗಳು ಚಿಕ್ಕ ಮಕ್ಕಳು, ವಯೋವೃದ್ಧರು ಹಾಗೂ ಮನುಷ್ಯರ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿದ್ದು ನಗರ ನಿವಾಸಿಗಳು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.


    ದಿನದಿಂದ ಬೆಳೆಯುತ್ತಿರುವ ನಗರದಲ್ಲಿ ಬಡವಾಣೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಬಡಾವಣೆಗಳ ಅಲ್ಲಲ್ಲಿ ಮಾಂಸ ಮಾರುವ ಅಂಗಡಿಗಳು ಹೆಚ್ಚುತ್ತಿವೆ. ಸರಿಯಾಗಿ ಮಾಂಸದ ತ್ಯಾಜ್ಯಗಳನ್ನು ವಿಲೇವಾರಿ ಮಾಡದ ಕಾರಣ ತ್ಯಾಜ್ಯವನ್ನು ಶ್ವಾನಗಳು ಸೇವನೆ ಮಾಡುತ್ತಿದ್ದು ರಕ್ತದ ರುಚಿಯನ್ನು ಸೇವನೆ ಮಾಡುತ್ತಿರುವ ಬೀದಿ ಶ್ವಾನಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ನವ್ಹೇಂಬರ ತಿಂಗಳೊAದರಲ್ಲೇ ೫೦ಕ್ಕೂ ಅಧಿಕ ಶ್ವಾನ ದಾಳಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಶ್ವಾನಗಳ ಉಪಟಳ ಹೆಚ್ಚಾಗಿರುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವಾರು ಸಂಘ ಸಂಸ್ಥೆಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಶ್ವಾನಗಳ ದಾಳಿಯಲ್ಲಿ ಗಾಯಗೊಂಡವರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಕಾರಣ ಬೆಳಗಾವಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಶ್ವಾನದಾಳಿ ಗಂಭೀರವಾಗಿ ಪರಿಗಣಿಸಿ: ಶ್ವಾನಗಳ ಉಪಟಳದಿಂದ ನಗರದ ನಾಗರಿಕರು ಬೇಸತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಇಲ್ಲಿಯ ದುರ್ಗಾ ನಗರದ ರೋಟರಿ ರಕ್ತ ಭಂಡಾರದ ಹತ್ತಿರ ಇಬ್ಬರು ವೃದ್ಧರ ಮೇಲೆ ಶ್ವಾನಗಳು ಮಾರನಾಂತಿಕವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಸ್ಥಳೀಯರು ವೃದ್ಧರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಅಂಬ್ಯೂಲೇನ್ಸ್ ಮೂಲಕ ರವಾಣಿಸಲಾಗಿದೆ. ಕಳೆದ ಮರ‍್ನಾಲ್ಕು ತಿಂಗಳಿAದ ಇಂತಹ ಶ್ವಾನದಾಳಿ ಘಟನೆಗಳು ಜರುಗುತ್ತಲಿವೆ. ಆದರೆ ನಗರ ಸಭೆ ಅಧಿಕಾರಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. 


   ಶ್ವಾನಗಳ ದಾಳಿ ನಡೆದ ಬಳಿಕ ನಗರಸಭೆ ಅಧಿಕಾರಿಗಳು ಕ್ರಮದ ಭರವಸೆ ನೀಡಿ ಕೈಚೆಲ್ಲಿಕುಳಿತುಕೊಳ್ಳುತ್ತಾರೆ. ಆದರೆ ಶ್ವಾನಗಳ ಉಪಟಗಳ ತಗ್ಗಿಸಲು ಕ್ರಮಕೈಗೊಳ್ಳುವದಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ವಾದ. ಇನ್ನಾದರೂ ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಈ ಬಗ್ಗೆ ಕಠೀಣ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ.


ಶ್ವಾನಗಳ ಹಾವಳಿಗೆ ತತ್ತರಿಸಿದ ನಗರ ಜನತೆ: ಬೀದಿ ಶ್ವಾನಗಳ ಹಾವಳಿಗೆ ಗೋಕಾಕ ಜನ ತತ್ತರಿಸಿದ್ದಾರೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಮನೆಯಿಂದ ಶಾಲೆಗೆ ತೆರಳುವ ಹಾಗೂ ಶಾಲೆಯಿಂದ ಮನೆಗೆ ತೆರಳುವ ವೇಳೆ ಶಾಲಾ ಮಕ್ಕಳ ಮೇಲೂ ಶ್ವಾನಗಳ ದಾಳಿ ಮಾಡಿವೆ. ಒಟ್ಟಾಗಿ ಶ್ವಾನಗಳ ದಾಳಿ ಮಾಡಿದ್ದಲ್ಲಿ ಅಲ್ಲಿರುವ ಜನರು ಶ್ವಾನಗಳ ದಾಳಿಗೆ ತುತ್ತಾಗುತ್ತಿರುವವರನ್ನು ರಕ್ಷಿಸುವದು ಕಷ್ಟಕರ ಕೇಲಸ ಹೀಗಾಗಿ ಜನರು ಕೈಚೆಲ್ಲಿ ಕೂಡುವಂತಾಗಿದೆ. ಒಂದು ಶ್ವಾನ ಬೊಗಳಿದರೆ ಸಾಕು ಅದರ ಹಿಂದೆಯೇ ಮತ್ತಷ್ಟು ಸೇರಿಕೊಳ್ಳುತ್ತವೆ. ಇನ್ನು ಶ್ವಾನಗಳ ದಾಳಿಯಿಂದ ತಪ್ಪಿಪಿಕೊಳ್ಳಲು ಹೋಗಿ ಕೊನೆಗೆ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳೇ ಇವೆ.


ಸಂತಾನ ಹರಣ ಶಸ್ತ್ರಚಿಕಿತ್ಸೆ ಕೇವಲ ಕಾಗದದ ಪಾತ್ರದಲ್ಲಿ ಮಾತ್ರವೇ.?: ಹಲವು ವರ್ಷಗಳಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದಿರುವ ಕಾರಣ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎನ್ನಲಾಗಿದೆ. ಪ್ರತಿ ಸಭೆಯಲ್ಲಿ ನಗರಸಭೆ ಅಧಿಕಾರಿಗಳು ಶ್ವಾನಗಳ ನಿಂಯತ್ರಣ ಮಾಡಲಾಗುತ್ತಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸಂತಾನ ಹರಣ ಶಸ್ತçಚಿಕಿತ್ಸೆ ಹೆಸರಲ್ಲಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಕೆಲವು ಸಂಘಟಕ ಆರೋಪವಾಗಿದೆ. ಶ್ವಾನಗಳ ನಿಯಂತ್ರಣ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.


    ನಗರದಲ್ಲಿ ಮಕ್ಕಳಿಗೆ ನಾಯಿ ಕಡಿತದ ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಇಂಜೆಕ್ಷನ್ ಉಚಿತ, ರೆಷಣ ಕಾರ್ಡ್ ಇಲ್ಲದೆ ಹೊದರೆ ಹಣ ನೀಡಬೇಕು ಇದರಿಂದ ಬಡ ರೋಗಿಗಳು ಬೆಳಗಾವಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾದರೆ ಈ ಬೀದಿ ನಾಯಿಗಳ ಕಡಿತಕ್ಕೆ ಹೊಣೆ ಯಾರು? ನಾಯಿ ನಿಯಂತ್ರಣ ಮಾಡದ ನಗರ ಸಭೆಯೋ? ಇಂಜೆಕ್ಷನ್ ನೀಡದ ಆಸ್ಪತ್ರೆಯೋ? 


    ಒಟ್ಟಾರೆಯಾಗ ಇನ್ನಾದರೂ ಎಚ್ಚೆತ್ತುಕೊಂಡು ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರಾ ಎಂದು ಕಾಯ್ದು ನೋಡಬೇಕಾಗಿದೆ.
ಕಳೆದ ಹಲವು ತಿಂಗಳುಗಳಿAದ ಬೀದಿ ಬದಿಯ ಶ್ವಾನಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಶ್ವಾನಗಳ ದಾಳಿ ನಡೆಯುತ್ತಿದೆ. ನಗರದಲ್ಲಿ ಚಿಕಿತ್ಸೆ ನೀಡದ ಹಿನ್ನಲೆ ದಾಳಿಗೊಳಗಾದವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗುತ್ತಿದೆ. ನಗರಸಭೆ ಅಧಿಕಾರಿಗಳು ಸೂಕ್ತçಮಕೈಗೊಂಡು ಶ್ವಾನಗಳಿಂದ ಜನರ ರಕ್ಷಣೆ ಮಾಡಬೇಕಿದೆ. 
-ಸೋಮಶೇಖರ ಮಗದುಮ, ನಗರ ನಿವಾಸಿ.

Join WhatsApp Join Facebook Live Join Telegram

Tags: