ಗಣೇಶ ಹಬ್ಬದ ಮೆರವಣಿಗೆಯಲ್ಲಿ ನಶೆ ಮಾಡಿ ಬಂದ್ರ ಎಚ್ಚರ: ಪೊಲೀಸ್ ಕಮಿಷನರ್ ಹೇಳಿದ್ದೇನು..?
Join WhatsApp | Join Telegram | Live |

Yuva Vahini - News Desk.
ಬೆಳಗಾವಿ: ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗದಂತೆ ನೋಡಿಕೊಳ್ಳಲು ಬೆಳಗಾವಿ ಪೊಲೀಸರು ಸನ್ನಸರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ತಿಳಿಸಿದರು.
ಇಂದು ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ವಿವಿಧ ಗಣೇಶ ಉತ್ಸವ ಮಂಡಳಿಗಳ ಜೊತೆ ಸಭೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣಪತಿ ಹಬ್ಬದ ಸಂದರಭದಲ್ಲಿ ಪೊಲೀಸರ ಜೊತೆ ಸ್ವಯಂಪ್ರೇರಿತವಾಗಿ ಕೆಲಸ ಮಾಡುವರಿಗೆ ವಾಹನದ ವ್ಯವಸ್ಥೆ ಮಾಡಲಿದ್ದೇವೆ. ಗಣಪತಿ ಬರುವ ದಿನ ಸೂಕ್ತ ಬಂದೋಬಸ್ತ ಇರಲಿದೆ. ಬಂದೋಬಸ್ತಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಿದ್ದೇವೆ ಎಂದರು.
ಗಣಪತಿ ವಿಸರ್ಜನೆ ದಿನ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುವ ಕಾರಣ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತೇವೆ. ಗಣೇಶನ ವಿಸರ್ಜನೆ ದಿನ ಹೋಟೆಲ್ ಗಳಿಗೆ ತೆರೆಯಲು ಹೆಚ್ಚಿನ ಸಮಯ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಯಾರಾದರೂ ನಶೆ ಮಾಡಿ ಬಂದರೆ ಅಂತವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಇದನ್ನು ಪತ್ತೆ ಮಾಡಲು ಆಲ್ಕೋಹಾಲ್ ಪತ್ತೆ ಹಚ್ಚುವ ಯಂತ್ರ, ನಾರ್ಕೋಟಿಕ್ಸ್ ಕಿಟ್ ಮೂಲಕ ಅನುಮಾನ ಬಂದವರ ಮೇಲೆ ಪ್ರಯೋಗ ಮಾಡುತ್ತೇವೆ. ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್ ಮೂಲಕ ನಿಷೇಧಿತ ವಸ್ತುಗಳ ಪತ್ತೆ ಹಚ್ಚಲಿದ್ದೇವೆ. ಗಣೇಶನ ವಿಸರ್ಜನೆ ಸಂಧರ್ಭದಲ್ಲಿ ಮೂರ್ತಿ ಸಾಗಿಸುವ ಟ್ರಾಲಿ ಸೈಜ್ 18/8 ಅಡಿ ಇರಬೇಕು .ಗಣೇಶನ ವಿಸರ್ಜನೆ ದಿನ ಪಟಾಕಿ ನಿಷೇಧಿಸಲಾಗಿದೆ ಎಂದರು.
ಡಿಜೆ ತುಂಬಾ ಅಪಯಾಕಾರಿ, ಬೆಳಗಾವಿ ನಗರದ ಗಣೇಶ ವಿಸರ್ಜನೆ ಮಾರ್ಗದಲ್ಲಿ, 60ಕ್ಕೂ ಅಧಿಕ ಆಸ್ಪತ್ರೆಗೆಳಿವೆ. ಜನರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಪಲ್ಯೂಷನ್ ಕಂಟ್ರೋಲ್ ಬೋರ್ಡ್ ಪ್ರಕಾರ 85 ಡಿಸಿಬಲ್ ಕಿಂತ ಕಡಿಮೆ ಶಬ್ದ ಇರಬೇಕು. ಉಳಿದ 10 ದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ಡಿಜೆ ಹಚ್ಚಲು ಅವಕಾಶ ಇದೆ. ಗಣೇಶನ ವಿಸರ್ಜನೆ ದಿನ ಪೊಲೀಸರ ಹತ್ರ ಡಿಸಿಬಲ್ ಮೇಜರಮೆಂಟ್ ಮಷಿನ್ ಮೂಲಕ ಎಲ್ಲಾ ಡಿಜೆಗಳ ಪರಿಶೀಲನೆ ಆಗಲಿದೆ ಎಂದು ತಿಳಿಸಿದರು.
Join WhatsApp | Join Facebook | Live | Join Telegram |