ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.!

Dec 17, 2024 - 19:14
Dec 17, 2024 - 19:25
 80
Facebook Join WhatsApp Join Telegram Live

ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.!

Yuva Vahini - News Desk.

ಗೋಕಾಕ: ತಾಲೂಕಿನ ಕುಂದರನಾಡಿನ ಈರನಹಟ್ಟಿ ಗ್ರಾಮದ ಯೋಧ ಮಹೇಶ ನಿಂಗಪ್ಪ ವಾಲಿ ೨೪ ಶನಿವಾರದಂದು ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಭೂ ಕುಸಿತದಿಂದ ಮೃತಪಟ್ಟ ಘಟನೆ ನಡೆಸಿದ್ದು ಮಂಗಳವಾರದAದು ವೀರ ಯೋಧ ಮಹೇಶ ವಾಲಿಯವರ ಅಂತ್ಯಕ್ರೀಯೆ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಿತು.


   ಮೃತ ಯೋಧ ಮಹೇಶ ನಿಂಗಪ್ಪ ವಾಲಿ ಕಳೆದ ಆರು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಅಂಕಲಗಿಯಲ್ಲಿ ಮುಗಿಸಿದ್ದು, ಪಿಯೂಸಿ ವಿದ್ಯಾಭ್ಯಾಸವನ್ನು ಶ್ರೀ ಅಡವಿಸಿದ್ಧೇಶ್ವರ ಮಠದ ಪಿಯೂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯೋಧ ಮಹೇಶ ವಾಲಿ ೨೦೧೬ರಲ್ಲಿ ಭಾರತೀಯ ಸೇನೆಯ ಸಿಓ ಸೇವೆನ್ ಇಂಜನೀಯರಿAಗ್ ರೇಜಿಮೆಂಟನಲ್ಲಿ ಸೇವೆಗೆ ಸೇರಿದ್ದರು. ಕಳೆದ ಕೆಲವು ತಿಂಗಳುಗಳ ಹಿಂದೆಯೇ ಯೋಧನ ಮದುವೆ ನಿಶ್ಚಯವಾಗಿ ಬರುವ ಫೆಬ್ರುವರಿಯಲ್ಲಿ ಸಪ್ತಪದಿ ತುಳಿಯಲಿದ್ದರು ವಿಧಿಯಾಟದಿಂದಾಗಿ ಕಳೆದ ಡಿ.೧೪ರಂದು ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಬೆಟ್ಟ ಕುಸಿತದಿಂದಾಗಿ ಮೃತಪಟ್ಟಿದ್ದಾರೆ.


   ಮೃತ ಯೋಧ ಮಹೇಶ ತಂದೆ ನಿಂಗಪ್ಪ ವಾಲಿ ಸಹ ಭಾರತೀಯ ಸೇನೆಯ ಬಿಎಸ್‌ಎಫ್ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ತಾಯಿ ಸವೀತಾ ಮಗನಲ್ಲಿ ದೇಶಪ್ರೇಮ ಬೆಳೆಸಿ ಮಗನನ್ನು ಸೈನ್ಯಕ್ಕೆ ಸೇರುವಂತೆ ಉತ್ಸಾಹ ತುಂಬಿದ್ದರು. ಹಸೆಮನೆ ಏರಬೇಕಾದ ಗ್ರಾಮದ ಹುಡುಗನÀ ಪಾರ್ಥೀವ ಶರೀರ ಬರುವದನ್ನು ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.


    ಬೆಳಿಗ್ಗೆ ೭ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಯೋಧನ ಪಾರ್ಥಿವ ಶರೀರಕ್ಕೆ ಬೆಳಗಾವಿ ಜಿಲ್ಲಾಧಿಕಾರಿ, ತಹಶೀಲದಾರ ಸೇರಿ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಈರನಹಟ್ಟಿ ಗ್ರಾಮದ ವೀರ ಯೋಧ ಮಹೇಶ ವಾಲಿಯವರ ಪಾರ್ಥಿವ ಶರೀರ ಅಂಕಲಗಿ ಗ್ರಾಮದಿಂದ ಮೆರವಣಿಗೆ ಮೂಲಕ ಈರನಹಟ್ಟಿ ಗ್ರಾಮಕ್ಕೆ ೧೧.೩೦ಕ್ಕೆ ಕರೆತರಲಾಯಿತು. ಈರನಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಯೋಧನ ಪಾರ್ಥಿವ ಶರೀರ ಅಂತಿಮ ದರ್ಶನಪಡೆದರು ಸ್ವಗ್ರಾಮದಲ್ಲಿ ಯೋಧನ ಅಂತ್ಯಕ್ರೀಯೆ ಸಕಲ ಸರಕಾರಿ ಗೌರವಗಳೊಂದಿಗೆ ಯೋಧರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ನಮನ ಸಲ್ಲಿಸಿದರು.


    ಯೋಧನ ಅಂತ್ಯಕ್ರೀಯೆಯಲ್ಲಿ ಯುವನಾಯನ ಅಮರನಾಥ ಜಾರಕಿಹೊಳಿ, ತಹಶೀಲದಾರ ಮೋಹನ ಭಸ್ಮೆ, ಶಾಸಕರ ಆಪ್ತ ಸಹಾಯಕ ಭೀಮನಗೌಡ ಪೋಲಿಸಗೌಡ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.

Join WhatsApp Join Facebook Live Join Telegram

Tags: