ಇಂದಿನಿoದ ಶರಣ ಸಂಸ್ಕöತಿ ಉತ್ಸವ : ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ 

Jan 31, 2025 - 19:21
 57
Facebook Join WhatsApp Join Telegram Live

ಇಂದಿನಿoದ ಶರಣ ಸಂಸ್ಕöತಿ ಉತ್ಸವ : ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ 

Yuva Vahini - News Desk.

ಇಂದಿನಿAದ ಶರಣ ಸಂಸ್ಕöತಿ ಉತ್ಸವ : ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ 


ಗೋಕಾಕ: ನಗರದ ಶ್ರೀ ಶೂನ್ಯ ಸಂಪಾದನ ಮಠದ ಆಶ್ರಯದಲ್ಲಿ ಕಾಯಕಯೋಗಿ ಶ್ರೀ ವiನಿಪ್ರ ಲಿಂಗೈಕ್ಯ ಬಸವ ಮಹಾಸ್ವಾಮಿಗಳವರ ಇಪ್ಪತ್ತನೆಯ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕöÈತಿ ಉತ್ಸವ ಹಾಗೂ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ ೧  ರಿಂದ ೪ ರವರೆಗೆ ವೈಭವದಿಂದ ಜರುಗಲಿದೆ ಎಂದು ಕಾರ್ಯಕ್ರಮದ ರೂವಾರಿ ಪೂಜ್ಯಶ್ರೀ ವiನಿಪ್ರ ಮುರುಘÀರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.


 ನಾಲ್ಕು ದಿನಗಳವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವಿವರ ನೀಡಿರುವವರುವ ಅವರು,  ದಿನಾಂಕ ೧ ರಂದು ಶಾಲಾ ವಿದ್ಯಾರ್ಥಿಗಳಿಂದ ಅರಿವು ಅಕ್ಷರ ಆರೋಗ್ಯ ಕುರಿತು ಜಾಗೃತಿಗಾಗಿ ಕಾಲ್ನಡಿಗೆ ಜಾಥಾ. ಅಂದು  ಸಂಜೆ ಹಾಸ್ಯ ಮತ್ತು ಸಂಗೀತ ಸಮಾವೇಶ ಕಲಾವಿದರಾದ ಮಹಾನ್ಯ ಪಾಟೀಲ್, ಮಿಮಿಕ್ರಿ ಗೋಪಿ, ಗಿಲ್ಲಿ ನಟ ಭಾಗವಹಿಸಲಿದ್ದು ಶಾಸಕ ರಮೇಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


 ದಿನಾಂಕ ೨ ರಂದು ಸಂಜೆ ೬ ಗಂಟೆಗೆ  ಆರಕ್ಷಕರ ಸಮಾವೇಶ. ಬೈಲೂರಿನ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮುಂಡರಗಿ, ನಿವೃತ್ತ ಪೊಲೀಸ ಅಧಿಕಾರಿ ಡಾ: ಶಂಕರ್ ಬಿದರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ: ಅಲೋಕ್ ಕುಮಾರ ಸೇರಿದಂತೆ ಅನೇಕ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.


 ದಿನಾಂಕ ೩ Àರಂದು ಸಂಜೆ ೬ ಗಂಟೆಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಮಹಿಳಾ ಸಮಾವೇಶ  ಸಮಾರಂಭವು ಜರುಗಲಿದ್ದು, ಓಲಂಪಿಕ್ ಕ್ರೀಡೆಯಲ್ಲಿ ಭಾರತ ದೇಶದ ಜಮ್ನಾಸ್ಟಿಕ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಹೆಮ್ಮೆಯ ಕ್ರೀಡಾಪಟು ಪದ್ಮಶ್ರೀ ದೀಪಾ ಕರ್ಮಾಕರ್ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು.


ದಿನಾಂಕ ೪ ರಂದು ಸಂಜೆ ಯುವ ಸಮಾವೇಶ ನಡೆಯಲಿದ್ದು. ಅಂದು ಮುಂಜಾನೆ. ಶ್ರೀಮಠದ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಸಹಸ್ರ ಮುತ್ತೆöÊದೆಯರಿಗೆ ಉಡಿ ತುಂಬವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.

 ಪ್ರತಿ ದಿವಸದ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮಹನೀಯರಿಗೆ ಹಾಗೂ ಶರಣ ಸಂಸ್ಕöÈತಿ ಉತ್ಸವ ಕಾರ್ಯಕ್ರಮದ ದಾಸೋಹಿಗಳಿಗೆ ಗೌರವದ ಸನ್ಮಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ

Join WhatsApp Join Facebook Live Join Telegram

Tags: